Saturday, July 7, 2012

ದಾಖಲೆ!


ಎಲ್ಲ ದಾಖಲೆಗಳನ್ನು ಒದಗಿಸಿದ ಬಳಿಕ ಆ ಬಡವನಿಗೆ ರೇಶನ್ ಕಾರ್ಡ್ ಸಿಕ್ಕಿತು.
ಅದನ್ನು ಹಿಡಿದುಕೊಂಡು ಕೇಳಿದ ‘‘ಸಾರ್...ಇದಕ್ಕೆ ಅಕ್ಕಿ, ಸೀಮೆಎಣ್ಣೆ ಸಿಗತ್ತ’’
‘‘ಮತದಾರನ ಗುರುತು ಚೀಟಿ ಮಾಡುವುದಕ್ಕೆ ಇದರಿಂದ ತುಂಬಾ ಅನುಕೂಲ ಆಗತ್ತೆ’’
ಸರಿ. ರೇಶನ್ ಕಾರ್ಡ್ ಹಿಡಿದುಕೊಂಡು ಅಲೆಯ ತೊಡಗಿದ.
ಕೊನೆಗೂ ಮತದಾರನ ಗುರುತು ಚೀಟಿ ಸಿಕ್ಕಿತು ‘‘ಸಾರ್ ಇದರಿಂದ ಏನು ಅನುಕೂಲ ...’’ ಕೇಳಿದ.
‘‘ಓಟರ್ ಐಡಿ ಇದ್ರೆ ಬ್ಯಾಂಕ್ ಅಕೌಂಟ್ ಓಪನ್ ಮಾಡೊಕ್ಕೆ ಸುಲಭವಾಗುತ್ತೆ....’’
ರೇಶನ್‌ಕಾರ್ಡ್, ಓಟರ್‌ಐಡಿ ಹಿಡಿದುಕೊಂಡು ಮತ್ತೆ ಬ್ಯಾಂಕ್‌ಗೆ ಅಲೆಯ ತೊಡಗಿದ.
ಬ್ಯಾಂಕ್ ಅಕೌಂಟ್ ಓಪನ್ ಮಾಡಿದ.
‘‘ಸಾರ್...ಈ ಅಕೌಂಟ್‌ನಿಂದ ಏನು ಲಾಭ...?’’
‘‘ಅಕೌಂಟ್ ಓಪನ್ ಮಾಡಿದರೆ ಆಧಾರ್ ಕಾರ್ಡ್ ಮಾಡ್ಲಿಕ್ಕೆ ಬಹಳ ಸುಲಭ’’
ಬಡವ ತನ್ನ ರೇಶನ್ ಕಾರ್ಡ್, ಓಟರ್ ಐಡಿ, ಬ್ಯಾಂಕ್‌ಪಾಸ್‌ಬುಕ್ ಹಿಡಿದುಕೊಂಡು ಮತ್ತೆ ಅಲೆಯ ತೊಡಗಿದ.
ಕೊನೆಗೂ ಆಧಾರ್ ಕಾರ್ಡ್ ಸಿಕ್ಕಿತು.
‘‘ಸಾರ್ ಈ ಆಧಾರ್ ಕಾರ್ಡ್‌ನಿಂದ ನನಗೆ ಏನು ಲಾಭ...?’’
‘‘ಎಂತಹ ಮೂರ್ಖ ಪ್ರಶ್ನೆ. ಆಧಾರ್ ಇಲ್ಲದೇ ಇದ್ದರೆ ಏನೂ ಇಲ್ಲ. ರೇಶನ್ ಕಾರ್ಡ್, ಓಟರ್ ಐಡಿ, ಬ್ಯಾಂಕ್ ಪಾಸ್ ಬುಕ್...ಇದೆಲ್ಲ ಮಾಡುವುದಕ್ಕೆ ಆಧಾರ್ ಬೇಕೇ ಬೇಕು....’’
‘‘ಅದಿರ್ಲಿ ಸಾರ್...ರೇಶನ್ ಕಾರ್ಡ್‌ನಿಂದ ನನಗೇನು ಲಾಭ...?’’
‘‘ಅದೇರಿ....ಆಧಾರ್ ಕಾರ್ಡ್ ಮಾಡೋದಕ್ಕೆ...ಓಟರ್‌ಐಡಿ ಮಾಡೋದಕ್ಕೆ....’’
‘‘............................’’

No comments:

Post a Comment