Tuesday, November 19, 2013

ಬಾಮಿಯಾನ್ ನಲ್ಲಿ ಬುದ್ಧ

ಬಾಮಿಯಾನ್ ನಲ್ಲಿ
ತಾಲಿಬಾನಿಗಳು
ಬುದ್ಧನ ಬೃಹದೆತ್ತರದ
ವಿಗ್ರಹಗಳನ್ನು
ಮುರಿದು ಹಾಕಿದರು
ಎಂದರೆ ಸುಳ್ಳು

ಸಾಕ್ಷಾತ್
ಬುದ್ಧನೇ ಅದನ್ನು ಮುರಿದು
ಹಾಕಿದ

ಹಿಂದೆ ಅಲ್ಲಿ ಬುದ್ಧನಿದ್ದದ್ದು
ನಿಜವಾದರೆ
ಈಗಲೂ ಅಲ್ಲಿ ಬುದ್ಧನಿದ್ದಾನೆ

ಕೆಲವರು
ಬುದ್ಧನ ಕಟ್ಟುತ್ತಾ
ಅವನ ಹುಡುಕುತ್ತಾರೆ
ಇನ್ನು ಕೆಲವರು
ಅವನ ಮುರಿಯುತ್ತ

ಆದರೆ ಅವನು
ಕಟ್ಟುವ ಮೊದಲೂ ಇದ್ದ
ಮುರಿದ ಬಳಿಕವೂ ಇರುವ

1 comment:

  1. ಕೆಲವರು
    ಬುದ್ಧನ ಕಟ್ಟುತ್ತಾ
    ಅವನ ಹುಡುಕುತ್ತಾರೆ .... (ಸರಿ)
    ಇನ್ನು ಕೆಲವರು
    ಅವನ ಮುರಿಯುತ್ತ .......(!? )

    ReplyDelete